https://www.facebook.com/SuvarnaNews24X7/
https://twitter.com/
http://www.suvarnanews.tv/
ಸೇನಾ ಮುಖ್ಯಸ್ಥ ಬಿಪಿನ್ ರಾವತ್ ರನ್ನು ‘ಬೀದಿ ಗೂಂಡಾ’ ಎಂದು ಕರೆದು ವಿವಾದವನ್ನು ಸೃಷ್ಟಿ ಮಾಡಿದ ಕಾಂಗ್ರೆಸ್ ಸಂಸದ ಸಂದೀಪ್ ದೀಕ್ಷಿತ್’ರಿಂದ ಪಕ್ಷ ಅಂತರ ಕಾಯ್ದುಕೊಂಡಿದೆ. ಯಾವೊಬ್ಬ ರಾಜಕಾರಣಿಯೂ ಸೇನಾ ಮುಖ್ಯಸ್ಥರನ್ನು ಟೀಕೆ ಮಾಡಬಾರದು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಸಂದರ್ಶನವೊಂದರಲ್ಲಿ ಕಾಶ್ಮೀರ ಸಮಸ್ಯೆ ಬಗ್ಗೆ ಮಾತನಾಡಿದ್ದ ಸೇನಾ ಮುಖ್ಯಸ್ಥ ಜ. ರಾವತ್, ಪ್ರತಿಭಟನಕಾರರು ತಮ್ಮತ್ತ ಕಲ್ಲೆಸೆಯುವುದಕ್ಕೆ ಬದಲು ಶಸ್ತ್ರಾಸ್ತ್ರಗಳನ್ನು ಬಳಸುತ್ತಿದ್ದರೆ ತಮ್ಮ ಕಾರ್ಯ ಸುಲಭವಾಗುತಿತ್ತು ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ಪ್ರತಿಯಾಗಿ ಸಂದೀಪ್ ದೀಕ್ಷಿತ್ ರಾವತ್ ರನ್ನು ಬೀದಿ ಗೂಂಡಾ ಎಂದು ಕರೆದಿದ್ದಾರೆ. ಇದು ಭಾರೀ ವಿಚಾದಕ್ಕೆ ಕಾರಣವಾಗಿದ್ದು, ಅವರ ಕ್ಷಮೆಯಾಚನೆಗೆ ಬಿಜೆಪಿ ಪಟ್ಟು ಹಿಡಿದಿದೆ. ವಿವಾದದ ಕಿಡಿ ಹೆಚ್ಚಾದಾಗ ಸಂದೀಪ್ ತಮ್ಮ ಹೇಳಿಕೆಯನ್ನು ಹಿಂತೆಗೆದುಕೊಂಡಿದ್ದಾರೆ.
ಸೇನಾ ಮುಖ್ಯಸ್ಥರ ಬಗ್ಗೆ ಮಾತನಾಡುವಾಗ ವಿವಾದಗಳಿಂದ ದೂರವಿರುವಂತೆ ನಾವು ಸಲಹೆ ನೀಡಿದ್ದೆವು. ಅಂತಹ ಹೇಳಿಕೆಗೆ ನಾವು ಬೆಂಬಲ ನೀಡುವುದಿಲ್ಲ ಎಂದು ಕಾಂಗ್ರೆಸ್ ಹೇಳಿದೆ. ಈ ಕುರಿತು ಸುವರ್ಣ ನ್ಯೂಸ್ ನಲ್ಲಿ ಮೈಂಡ್ ಯುವರ್ ಲಾಗ್ವೇಜ್ ಎಂಬ ಶೀರ್ಷಿಕೆಯಡಿ ಚರ್ಚೆ ನಡೆಸಲಾಯಿತು. ಚರ್ಚೆಯಲ್ಲಿ ಬಾಲನ್ ( ಸಾಮಾಜಿಕ ಹೋರಾಟಗಾರರು),ನಿವೃತ್ತ ಹಿರಿಯ ಸೇನಾಧಿಕಾರಿ ಮುರುಳಿ, ತೇಜಸ್ವಿ ಸೂರ್ಯ ಯುವ ಬಿಜೆಪಿ ಮುಖಂಡ, ಪ್ರಕಾಶ್ ರಾಠೋಡ್ ಕಾಂಗ್ರೆಸ್ ಮುಖಂಡ ಮತ್ತು ಸುವರ್ಣ ಸುದ್ಧಿ ವಿಭಾಗದ ಮುಖ್ಯಸ್ಥರಾದ ಅಜಿತ್ ಹನುಮಕ್ಕನವರ್ ಭಾಗವಹಿಸಿದ್ದರು,.
language
1497357706
2017-06-13 12:41:46
5:15
UCjElJyiXmQXnWmceQ1JyKrA
Suvarna News | ಸುವರ್ಣ ನ್ಯೂಸ್
2
1
source
The Engineering of Conscious Experience
AI, Art & Consciousness